ಸಮುದಾಯದ ಒಗ್ಗಟ್ಟಿನ ಮೂಲಕ ಕನ್ನಡದ ತಾಂತ್ರಿಕ ಬೆಳವಣಿಗೆಗೆ ಆಗಬೇಕಿರುವ ಅನೇಕ ಕೆಲಸಗಳನ್ನು 'ಕ್ರೌಡ್ ಸೋರ್ಸಿಂಗ್' ಮೂಲಕ ಸಾಧ್ಯವಾಗಿಸುವ ವೇದಿಕೆ ಸಮೂಹ ಸಂಚಯ.‍


'ಓಸ್ಮಾನಿಯ ಯುನಿವರ್ಸಿಟಿ ಡಿಜಿಟಲ್ ಲೈಬ್ರರಿ' ಮತ್ತು 'ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ' ಕನ್ನಡ ಪುಸ್ತಕಗಳು, ಅವುಗಳ ಲೇಖಕ ಹಾಗೂ ಪ್ರಕಾಶಕರ ಹೆಸರುಗಳನ್ನು ಕನ್ನಡೀಕರಿಸುವ ಕೆಲಸಕ್ಕೆ 'ಸಮೂಹ ಸಂಚಯ'ದೊಂದಿಗೆ ಕೈ ಜೋಡಿಸಿದ್ದಕ್ಕೆ ಧನ್ಯವಾದಗಳು.

ಈ ಎಲ್ಲ ಪುಸ್ತಕಗಳನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುವಂತೆ 'ಪುಸ್ತಕ ಸಂಚಯ' ಅಭಿವೃದ್ಧಿ ಪಡಿಸಲಾಗಿದೆ.