ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ (http://oudl.osmania.ac.in) ೨೦೦೦ಕ್ಕೂ ಹೆಚ್ಚು ಪುಸ್ತಕಗಳ ಹೆಸರು ಇಂಗ್ಲೀಷ್ ನಲ್ಲಿದ್ದು ಕನ್ನಡಿಗರು ಅವುಗಳನ್ನು ಹುಡುಕಿ ತೆಗೆಯುವುದು ಕಷ್ಟದ ಕೆಲಸ.
ಇದಕ್ಕೆ ಮುಖ್ಯ ಕಾರಣಗಳು:
ಎಲ್ಲ ಹೆಸರುಗಳು ಇಂಗ್ಲೀಷ್‌ನಲ್ಲಿರುವುದು (ಕಂಗ್ಲೀಷ್).
ಇಂಗ್ಲೀಷ್‌ನಲ್ಲಿರುವ ಹೆಸರುಗಳು ಸಾಮಾನ್ಯರು ಅರ್ಥವಾಗದ ರೀತಿಯಲ್ಲಿರುವುದು.
ಪ್ರಕಾಶಕ, ಲೇಖಕ ಅಥವಾ ಪುಸ್ತಕಗಳ ಹೆಸರೇ ತಪ್ಪಾಗಿ ಕಂಪ್ಯೂಟರೀಕರಗೊಂಡಿರುವುದು
ಇತ್ಯಾದಿ.
ಈ ಪುಸ್ತಕಗಳನ್ನು ಕನ್ನಡಿಗರಿಗೆ ತಲುಪುವಂತೆ ಮಾಡಲು ಇವುಗಳನ್ನು ಯುನಿಕೋಡ್ ಶಿಷ್ಠತೆಯನ್ನು ಬಳಸಿ ಕನ್ನಡೀಕರಿಸುವುದರ ಜೊತೆಗೆ ಸುಲಭ ಸರ್ಚ್ ಸೌಲಭ್ಯದ ಮೂಲಕ ಸುಲಭವಾಗಿ ಸಿಗುವಂತೆ ಮಾಡುವುದಕ್ಕಾಗಿ ಸಮೂಹ ಸಂಚಯ ಈ ಮೊದಲ ಯೋಜನೆಗೆ ಕೈ ಹಾಕಿದೆ.
ಎಲ್ಲ ಪುಸ್ತಕ, ಲೇಖಕ ಹಾಗೂ ಪ್ರಕಾಶಕರನ್ನು ಸುಲಭವಾಗಿ 'ಪುಸ್ತಕ ಸಂಚಯ' ಯೋಜನೆಯ ಮೂಲಕ ಹುಡುಕಲು ಸಾಧ್ಯವಾಗಿಸುವುದು.
ಕನ್ನಡೀಕರಿಸಿದ ಪುಸ್ತಕಗಳಿಗೆ ಅವುಗಳದ್ದೇ ಆದ ವಿಕಿ ಪುಟಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಹೆಣೆಯುವಂತೆ ಮಾಡುವುದು.
ವಿಕಿಪೀಡಿಯದಲ್ಲಿ ಈಗಾಗಲೇ ಲಭ್ಯವಿಲ್ಲದ ಲೇಖಕ/ಲೇಖಕಿಯರ ಪುಟಗಳು, ಕನ್ನಡ ಪುಸ್ತಕ ಪ್ರಕಾಶಕರ ಪುಟಗಳನ್ನೂ ಸೃಷ್ಟಿ ಮಾಡುವುದು.
* ಈಗಾಗಲೇ ಮುಕ್ತಾಯ ಗೊಂಡಿರುವ ಹಂತಗಳು
|
* ಕಾರ್ಯ ಪ್ರಗತಿಯಲ್ಲಿರುವ ಹಂತಗಳು
|
* ಮುಂದಿನ ಹಂತಗಳು
ಓಸ್ಮಾನಿಯ ವಿಶ್ವವಿದ್ಯಾನಿಲಯದ ಡಿಜಿಟಲ್ ಲೈಬ್ರರಿಯ ಕನ್ನಡ ಪುಸ್ತಕ, ಅವನ್ನು ಬರೆದ ಲೇಖಕರು, ಪ್ರಕಾಶಕರ ಹೆಸರುಗಳನ್ನು ಸಮೂಹ ಸಂಚಯದಲ್ಲಿ ಕನ್ನಡೀಕರಿಸಲಾಗಿದ್ದು ಅವುಗಳನ್ನು ಪುಸ್ತಕ ಸಂಚಯ ಸುಲಭವಾಗಿ ಹುಡುಕಲು ಸಹಾಯ ಮಾಡುತ್ತದೆ.